ಜೂಲಿಯಸ್ ಪ್ಲುಕರ್ (1801-68) ಜರ್ಮನಿ ದೇಶದ ಗಣಿತಜ್ಞ ಮತ್ತು ಭೌತವಿಜ್ಞಾನಿ. == ಜೀವನ == 1801 ಜೂನ್ 16ರಂದು ಜನನ. ಶುದ್ಧ ಗಣಿತಾಧ್ಯಯನದಲ್ಲಿ ಅರ್ಧಾಯುಷ್ಯ ಕಳೆದ. ಆ ವೇಳೆಗೆ ಗಿಸ್ಲರ್ ಕೊಳವೆಗಳು ಬಳಕೆಗೆ ಬಂದು ನಿರ್ವಾತದಲ್ಲಿ ವಿದ್ಯುದ್ವಿಸರ್ಜನೆಯ ಅಧ್ಯಯನ ಫಲಪ್ರದವಾಗಿತ್ತು. ಆಧುನಿಕ ಭೌತವಿಜ್ಞಾನದ ಉದಯವಾದದ್ದೇ ಈ ಕ್ಷೇತ್ರದಲ್ಲಿ. ನಿರ್ವಾತ ಕೊಳವೆಗಳಲ್ಲಿ ವಿದ್ಯುತ್ತು ಪ್ರವಹಿಸಿದಾಗ ಪ್ರತಿದೀಪ್ತಿ (ಫ್ಲೂರೆಸನ್ಸ್) ಕಾಣಿಸಿಕೊಳ್ಳುತ್ತದೆ. ಪ್ಲುಕರ್ ನಿರ್ವಾತ ಕೊಳವೆಯೊಂದನ್ನು ವಿದ್ಯುತ್ಕಾಂತದ ಧ್ರುವಗಳ ನಡುವೆ ಇಟ್ಟು ಪರೀಕ್ಷಿಸಿದ. ಆಗ ಪ್ರತಿದೀಪ್ತಿಯ ಆಕರ ಬೇರೆಯಾಯಿತು. ಧ್ರುವಗಳನ್ನು ಅದಲುಬದಲು ಮಾಡಿದಾಗ ಸ್ಥಾನಾಂತರ ದಿಕ್ಕು ಬದಲಾಯಿತು. ಅಂದಮೇಲೆ ವಿದ್ಯುದಾವೇಶಕ್ಕೂ ಪ್ರತಿದೀಪ್ತಿಗೂ ಸಂಬಂಧವಿದೆ ಎಂದಾಯಿತು. ಕ್ರಮೇಣ ಈ ದಿಶೆಯಲ್ಲಿ ವ್ಯವಸ್ಥಿತ ಸಂಶೋಧನೆಗಳು ನಡೆದು ಪ್ರತಿದೀಪ್ತಿಗೆ ಕಾರಣವಾದ ಎಲೆಕ್ಟ್ರಾನುಗಳ ಅವಿಷ್ಕಾರವಾಯಿತು.: 67 ಟಾರೀಚೆಲೀಯ (1608-47) ಸಂಶೋಧನೆಯಿಂದ ನಿರ್ವಾತದ ಪತ್ತೆಯಾಯಿತು. ಗಿಸ್ಲರ್ (1814-79) ಅದನ್ನು ಕೃತಕವಾಗಿ ಸೃಷ್ಟಿಸಿದ. ಪ್ಲುಕರ್ ಅದರ ಉಪಯೋಗ ಪಡೆದುಕೊಂಡ. 1868 ಮೇ 22 ರಂದು ಬಾನ್ ನಗರದಲ್ಲಿ ನಿಧನನಾದ. == ಉಲ್ಲೇಖಗಳು ==